Accident

ಇಟಿಗಟ್ಟಿ ಬಳಿ ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ..ಭೀಕರ ರಸ್ತೆ ಅಪಘಾತದಲ್ಲಿ 10ಕ್ಕೇರಿದ ಸಾವಿನ ಸಂಖ್ಯೆ

Share

ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 10ಕ್ಕೇರಿದ್ದು, ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆ.
ಧಾರವಾಡ ಗ್ರಾಮೀಣ ಠಾಣೆ ಸಬ್ ಇನ್ಸಪೆಕ್ಟರ್ ಮಹೇಂದ್ರಕುಮಾರ ಉಪಸ್ಥಿತಿಯಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಟೆಂಪೋದಲ್ಲಿ ಸಿಲುಕಿಕೊಂಡ ಹತ್ತು ಶವಗಳನ್ನ ಈಗಾಗಲೇ ಹೊರಗೆ ತೆಗೆಯಲಾಗಿದೆ.

ದಾವಣಗೆರೆಯ ವಿವಿದ ಪ್ರದೇಶದಿಂದ ಬೆಳಗಿನ ಜಾವ ಮೂರು ಗಂಟೆಗೆ ಹೊರಟಿದ್ದ ಟೆಂಪೋ ಇಟಿಗಟ್ಟಿ ಸಮೀಪ ಟಿಪ್ಪರವೊಂದಕ್ಕೆ ಡಿಕ್ಕಿ ಹೊಡೆದಿದೆ. ಒಟ್ಟು 17 ಮಹಿಳೆಯರು ಪ್ರವಾಸಕ್ಕೆ ಗೋವಾಗೆ ಹೊರಟಿದ್ದು, ಸಂಕ್ರಮಣ ಆಚರಣೆ ಮಾಡಲು. ಬಹಳ ದಿನಗಳ ನಂತರ ಎಲ್ಲರ ಸೇರಿಕೊಂಡು ಪ್ಲಾನ್ ಮಾಡಿದ್ದ ಪ್ರವಾಸಕ್ಕೆ ಜವರಾಯ ಅಡ್ಡಿಯಾಗಿದ್ದು, ಗೋವಾಗೆ ಹೋಗುವ ಮುನ್ನವೇ ಹತ್ತು ಜನರು ಸಾವಿಗೀಡಾಗಿದ್ದಾರೆ. ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Tags:

error: Content is protected !!