ಖಾನಾಪುರ ತಾಲೂಕಿನ ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ.ಸಲೀಮಾ ನದಾಫ್ ಚಾಲನೆ ನೀಡಿದರು.
ಹೌದು ಖಾನಾಪೂರ ತಾಲೂಕಿನ ಪೂರ್ವ ಭಾಗದಲ್ಲಿ ಬರುವ ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ಡಾ.ಸಲೀಮಾ ನದಾಫ್ ಅವರು ವ್ಯಾಕ್ಸಿನ್ ಕೀಟ್ ಕೊಠಡಿಯನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದ ನಂತರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಆರೋಗ ಕೇಂದ್ರದ ಸರ್ವ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳುವ ಹುಮ್ಮಸ್ಸಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಲಂಕಾರಗೊಳಿಸಿ, ಕೊರೊನಾ ಮಹಾಮಾರಿಯಿಂದ ಮುಕ್ತರಾಗಲು ಕೊರೊನಾ ಲಸಿಕೆಯನ್ನು ಸ್ವಾಗತಿಸಲಾಯಿತು. ನಂತರ ಕೊರೊನಾ ವಾರಿಯರ್ಸಗಳಿಗೆ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಡಾ.ಪೂಜಾ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.