ಈ ಹಿಂದೆ ಇದ್ದ ಸಮಿಶ್ರ ಸರ್ಕಾರ ದುರಾಡಳಿತ ಧಿಕ್ಕರಿಸಿ ಬಂದು, ನಮ್ಮ ಪಕ್ಷ ಸೇರಿ ಸರ್ಕಾರ ರಚನೆಗೆ ಸಹಕಾರ ನೀಡಿದ ಎಲ್ಲರನ್ನು ವರಿಷ್ಠರು ಗಮನದಲ್ಲಿ ಇಟ್ಟುಕೊಂಡಿದ್ದಾರೆ.
ಎಲ್ಲರಿಗೂ ನ್ಯಾಯ ನೀಡುವ ಕಾರ್ಯ ನಮ್ಮ ವರಿಷ್ಠರು ಮಾಡುತ್ತಾರೆ ಎಂದು ಉಪ ಮುಖ್ಯಂಮತ್ರಿಗಳಾದ ಗೋವಿಂದ ಕಾರಜೋಳವರು ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರೆಯೇ ನೀಡಿದ ಅವರು, ರಾಜ್ಯದ ಹಲವು ವಿಚಾರ ಸೇರಿದಂತೆ ಕ್ಯಾಬಿನೆಟ್ ಎಕ್ಸಫಾನ್ ಕುರಿತು ಇಂದು ದೆಹಲಿಯಲ್ಲಿ ನಮ್ಮ ಮುಖ್ಯಮಂತ್ರಿಯವರು ರಾಷ್ಟ್ರೀಯ ನಾಯಲರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಾರೆ.
ರಾಷ್ಟ್ರೀಯ ಪಕ್ಷವಾಗಿರುವುದರಿಂದ ನಮ್ಮ ಪಕ್ಷದ ಹೈಕಮಾಂಡ್ ಈಗ ಸಿಎಂ ಬಿಎಸ್‌ವೈ ಅವರನ್ನು ಚರ್ಚೆಗೆ ಅಹ್ವಾನಿಸಿದ್ದಾರೆ. ಅಲ್ಲಿಂದ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗುವುದು ಎಲ್ಲರಿಗೂ ನ್ಯಾಯವನ್ನು ನಮ್ಮ ವರಿಷ್ಠರು ಒದಗಿಸುತ್ತಾರೆ ಎಂದರು.