Belagavi

ಆಸ್ತಿ ವಿವಾದದ ಹಿನ್ನೆಲೆ ೪ ವರ್ಷದ ಬಾಲಕನನ್ನ ಕೊಲೆ ಮಾಡಿದ ಪಾಪಿಗಳು

Share

ಆಸ್ತಿ ವಿವಾದದ ಹಿನ್ನೆಲೆ ನಾಲ್ಕು ವರ್ಷದ ಬಾಲಕನನ್ನು ಕುಡಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ.


೪ ವರ್ಷದ ಬಾಲಕ ವೀರಪ್ಪ ಸಂಕನ್ನವರನನ್ನ ಆಸ್ತಿವಿವಾದ ಹಿನ್ನೆಲೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ದೊಡ್ಡಪ್ಪ ಈರಪ್ಪ ಸಂಕನ್ನವರ ಎಂಬಾತ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಘಟನೆ ಬಳಿಕ ಪರಾರಿಯಾಗಿದ್ದಾನೆ. ತಂದೆ-ತಾಯಿ ಯಾರು ಇಲ್ಲದ ಸಮಯವನ್ನ ಸಾಧಿಸಿ ಈ ಕೊಲೆಯನ್ನ ಮಾಡಲಾಗಿದೆ. ಮೃತ ಬಾಲಕನ ತಂದೆ ಹಾಗೂ ಕೊಲೆ ಮಾಡಿದ ಆರೋಪಿ ಈರಪ್ಪನ ನಡುವೆ ಜಮೀನು ವಿಚಾರದ ಗಲಾಟೆ ನಡೆದಿತ್ತು ಎಂದು ಹೇಳಲಾಗುತ್ತಿದೆ.


ಮುರಗೋಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Tags:

error: Content is protected !!