Belagavi

ಅವಶ್ಯಕತೆ ಇರುವುದನ್ನು ಪೂರೈಸುವ ಬರವಣಿಗೆ ಜಾತಿವಾದಿಯಲ್ಲ-ಸಾಹಿತಿ ರಾಘವೇಂದ್ರ ಪಾಟೀಲ

Share

ಅವಶ್ಯಕತೆ ಇರುವುದನ್ನು ಪೂರೈಸುವ ಬರವಣಿಗೆ ಜಾತಿವಾದಿಯಲ್ಲ, ಪ್ರಾಮಾಣಿಕ ಅನುಭವದ ಬರವಣಿಗೆ ಮುಖ್ಯ ಎಂದು ನಾಡಿನ ಹಿರಿಯ ಸಾಹಿತಿಗಳಾದ ರಾಘವೇಂದ್ರ ಪಾಟೀಲ ಹೇಳಿದರು.

ಮಾಯಾ ಪ್ರಕಾಶನ ಕಮಲಾಪುರ(ಬೆಣ್ಣೂರ) ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ ಮತ್ತು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ(ರಿ) ಶಿರಸಂಗಿ. ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರ ಇವರ ಸಹಯೋಗದಲ್ಲಿ ವಿಶ್ವಕರ್ಮರ ಶಕ್ತಿಪೀಠವಾದ ಶಿರಸಂಗಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಯುವ ಬರಹಗಾರರಿಗಾಗಿ 2ದಿನದ ರಾಜ್ಯ ಮಟ್ಟದ ಕಾವ್ಯ ಕಥಾ ಕಮ್ಮಟವನ್ನು ಜ್ಯೋತಿ ಬೇಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ರಾಘವೇಂದ್ರ ಪಾಟೀಲ ಸಮಕಾಲಿನ ಸಾಹಿತ್ಯವೂ ಮಾನವ ಬದುಕಿನ ಅನುಭವ ಕಟ್ಟಿಕೊಡುವ ಮೂಲಕ ಸಮಾಜ ಸಮುದಾಯ ಸಂಸ್ಮ್ಕøತಿಯನ್ನು ಅರ್ಥೈಸುವ ಕಾರ್ಯವನ್ನು ಮಾಡಬೇಕಿದೆ, ಹೀಗಾಗಿ ಮನುಷ್ಯ ಮತ್ತು ಸಮುದಾಯಗಳಿಗೆ ಅವಶ್ಯಕತೆ ಪೂರೈಸುವ ಬರವಣಿಗೆ ಜಾತಿವಾದಿಯಾಗುವದಿಲ್ಲಾ, ಆದರೆ ಬೇರೆ ಜಾತಿಗಳನ್ನು ನಿಂದಿಸುವುದು ತಪ್ಪು, ಜಾತಿವಾದದ ನಿಜವಾದ ಸ್ವರೂಪ ಬದಲಾವಣೆಯಾಗುತ್ತಿರುವದು ಕಳವಳದ ಸಂಗತಿ ಯಾಗಿದೆ, ಇದನ್ನು ಯುವ ಬರಹಗಾರರು ಎಚ್ಚರಿಕೆಯಿಂದ ಅವಲೋಕಿಸಬೇಕಾಗಿದೆ ಎಂದರು. ಕಮ್ಮಟದಲ್ಲಿ ವಿಶ್ವನಾಥ ಪತ್ತಾರ ಅವರುÀ ಸಂಪಾದಿಸಿದ “ಕುಂದಣ”, ಡಾ, ಕೆ,ಅನಂತರಾಮು ಅವರ “ನಾಗಲಿಂಗನ ದಿವ್ಯದಾಮಗಳು” ಪೆÇ್ರೀ.ಗುರುನಾಥ ಎಂ ಬಡಿಗೇರ ಅವರ “ಸ್ವರಾಂಕ” ಪುಸ್ತಕಗಳನ್ನು ಹಾಗೂ ಶ್ರೀಶೈಲ ಬಡಿಗೇರ ಅವರು ತಯಾರಿಸಿದ ಒಂದು ಕೋಟಿ ವರ್ಷದ ಕ್ಯಾಲೇಂಡರನ್ನು ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾದ ಡಾ,ಬಾಳಾಸಾಹೇಬ ಲೋಕಾಪುರ ಬಿಡುಗಡೆ ಮಾಡಿದರು.

: ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನವಲಗುಂದ ನಾಗಲಿಂಗ ಸ್ವಾಮಿ ಮಠದ ಪರಮಪೂಜ್ಯ ಶ್ರೀ ವೀರೇಂದ್ರಸ್ವಾಮೀಜಿ ವಹಿಸಿದ್ದರು. ಕಾವ್ಯ ಮತ್ತು ಕಥಾ ಕಮ್ಮಟದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ, ಅತಿಥಿಗಳಾಗಿ ಚಂದ್ರಶೇಖರ ಆರ್, ವೇದಪಾಠಕ, ಅರವಿಂದ ಪತ್ತಾರ, ಪೆÇ್ರ.ಪಿ.ಬಿ.ಬಡಿಗೇರ ಉಪಸ್ಥಿತರಿದ್ದರು.

 

 

Tags:

error: Content is protected !!