Belagavi

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣ ಹಿನ್ನೆಲೆ ಬೆಳಗಾವಿಯಲ್ಲಿ ನಿಧಿ ಸಮರ್ಪಣಾ ಅಭಿಯಾನ

Share

ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾಧ್ಯಂತ ನಡೆಯುತ್ತಿರುವ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನವನ್ನು ಬೆಳಗಾವಿಯಲ್ಲಿ ವಿಎಚ್‍ಪಿ ಹಾಗೂ ಭಜರಂಗದಳದಿಂದ ಹಮ್ಮಿಕೊಳ್ಳಲಾಗಿತ್ತು.

ಸೋಮವಾರ ಬೆಳಗಾವಿಯ ಶಾಹುನಗರದ ಶಿವಾಲಯ ಮಂದಿರದಲ್ಲಿ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಿಧಿ ಸಮರ್ಪಣಾ ಅಭಿಯಾನಕ್ಕೆ ಕಾರಂಜಿಮಠದ ಪರಮಪೂಜ್ಯ ಗುರುಶಿದ್ಧ ಸ್ವಾಮೀಜಿ, ಶಾಸಕ ಅನಿಲ್ ಬೆನಕೆ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕಾರಂಜಿ ಮಠದ ಗುರುಶಿದ್ಧ ಸ್ವಾಮೀಜಿ ನಿಧಿ ಅಭಿಯಾನ ದೇಶಾಧ್ಯಂತ ಅತ್ಯಂತ ಯಶಸ್ವಿಯಾಗಿ ಆರಂಭವಾಗಿದೆ. ಬೆಳಗಾವಿಯಲ್ಲಿಯೂ ಕೂಡ ವಿಎಚ್‍ಪಿ ಹಾಗೂ ಭಜರಂಗದಳದ ವತಿಯಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮನ ಆದರ್ಶ ಸಾರುವ ಮಂದಿರ ನಿರ್ಮಾಣ ಆಗುತ್ತಿದೆ. ದೇಶ ವಿದೇಶದ ಜನರು ಅಲ್ಲಿಗೆ ಬಂದ್ರೆ ಭಾರತದ ಸಂಸ್ಕøತಿ ಪ್ರತಿಬಿಂಬಿಸುವ ರಾಮಮಂದಿರ ನಿರ್ಮಾಣವಾಗುತ್ತಿದೆ ಹೀಗಾಗಿ ಎಲ್ಲರೂ ತಮ್ಮ ಶಕ್ತಿ ಅನುಸಾರ ಕಾಣಿಕೆ ನೀಡುವಂತೆ ಸ್ವಾಮೀಜಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪರಮೇಶ್ವರ ಹೆಗಡೆ, ಶ್ರೀಕಾಂತ ಕದಂ, ವಿಜಯ್ ಜಾಧವ್, ಬಸವರಾಜ್ ಹಳಿಂಗೋಳ, ಕೃಷ್ಣಾ ಭಟ್, ವಾಣಿ ರಮೇಶ, ಸತೀಶ ಮಾಳೋದೆ, ಅನುಪ್ ಕಾಟೆ, ಶಿವಬಸಪ್ಪ ಭಾವಿ, ಅಶೋಕ್ ಶಿಂಥ್ರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!