ನನ್ನ ತಂಟೆಗೆ ಬಂದ್ರೆ ಹುಷಾರ್..ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ. ನನ್ನ ಸುದ್ದಿಗೆ ಬಂದ್ರೆ, ಸರಿ ಇರದು. ಹೇಗೋ ಸುಭದ್ರವಾಗಿದ್ದೀರಿ ನಾನು ಕೈ ಹಾಕಿದ್ರೆ ಸರಿ ಇರಲ್ಲ, ಕಾಂಗ್ರೆಸ್ ಬಗ್ಗೆ ಮಾತನಾಡಿಕೊಳ್ಳಿ ಎಂದು ಸಿಎಂ ಯಡಿಯೂರಪ್ಪಗೆ ಮಾಜಿ ಸಿಎಂ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಬಿ ಟೀಮ್ ಎಂದವರು, ಯಡಿಯೂರಪ್ಪ ಇಳಿಯುತ್ತಾರೆ ಎಂದು ಹೇಳ್ತಾರೆ. ಹಾಗಾದರೆ ಆರ್‍ಆರ್‍ಎಸ್ ಬಿ ಟೀಮ್ ಇವರಾ..? ಎಂದು ಕುಮಾರಸ್ವಾಮಿ ಇದೇ ವೇಳೆ ಸಿದ್ದರಾಮಯ್ಯ ಅವರು ಹೆಸರು ಹೇಳದೇ ಟಾಂಗ್ ಕೊಟ್ಟರು. ಇನ್ನು ಯಡಿಯೂರಪ್ಪ ನೀವು ಸದ್ಯ ಹೇಗೋ ಕ್ಷೇಮವಾಗಿ ಇದ್ದೀರಿ ಇರಿ, ಅಪ್ಪ-ಮಕ್ಕಳ ತಂಟೆಗೆ ಬರಬೇಡಿ. ಇನ್ನೊಂದು ಜನ್ಮ ಎತ್ತಿ ಬಂದರೂ ಜೆಡಿಎಸ್ ನಿರ್ನಾಮ ಅಸಾಧ್ಯ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಸಿಡಿ ವಿಚಾರದ ಬಗ್ಗೆ ಮಾತನಾಡೋಲ್ಲ, ಈಗಲಾದರೂ ಅಭಿವೃದ್ಧಿಯ ಕಡೆ ಜನ ಗಮನ ಹರಿಸಲಿ. ಆಡಳಿತದ ವೈಫಲ್ಯ ಮುಂದುವರಿದಿದೆ. ಯಾವ ಅಳತೆಗೋಳಿನ ಆಧಾರದಲ್ಲಿ ಮಂತ್ರಿ ಮಾಡಿಜ್ದೀರೋ ತಮಗೆ ಬಿಟ್ಟದ್ದು, ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಹರಿಸಿ, ಅಧಿಕಾರದ ಮದದಲ್ಲಿ ಮುಂದಿನ ಬಾರಿಯೂ ನಮ್ಮ ಸರ್ಕಾರ ಬರುತ್ತೆ ಎಂದು ಹೇಳ್ತಾರೆ. ಸಾರ್ವತ್ರಿಕ ಚುನಾವಣೆ ಬೇರೆಯದ್ದೆ ರೀತಿ ನಡೆಯಲಿದೆ. ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಹರಿಸಿ, ಇಲ್ಲಿಯವರೆಗೆ ರಾಜ್ಯ ಲೂಟಿ ಮಾಡಿದ್ದು ಸಾಕು ಎಂದರು.
ಅವನ್ಯಾರೋ ನೀರಾವರಿ ಸಚಿವ ಮಾತನ್ನಾಡಿದ್ದಾನೆ. ಸಿ.ಪಿ. ಯೋಗೇಶ್ವರ್ ಒಂಬತ್ತು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅಂತ. ಮನೆ ಮಾರಿ ಸಾಲ ಮಾಡಿ ಖರ್ಚು ಮಾಡಿದ್ದಾರಂತೆ. ನನ್ನ ಅವಧಿಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದರು. ಈಗ ಇವರೆಲ್ಲ ಎಲ್ಲಿ ಹೋದರು? ಎಂದು ಐಟಿ ಇಲಾಖೆ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಒಟ್ಟಾರೆ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರ ವಿರುದ್ಧವೂ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದು ಕಂಡು ಬಂತು.