ಅನೈತಿಕ ಸಂಬಂದ ಹಿನ್ನೆಲೆಯಲ್ಲಿ ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಡಬಲ್ ಮರ್ಡರ್ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದದ ತೋಟದಲ್ಲಿ ಈ ಮರ್ಡರ್ ನಡೆದಿದ್ದು ಸ್ವತ ಪತಿಯೇ ಪತ್ನಿ ಹಾಗೂ ಪ್ರೇಮಿಯ ಹತ್ಯೆ ಮಾಡಿದ್ದಾನೆ.
ಪತಿಯ ಏಟಿಗೆ ಪತ್ನಿಯ ಮುಖ ಕೂಡ ಗೊತ್ತಾಗದ ಹಾಗೆ ಅತ್ಯಂತ ಬೀಭತ್ಸವಾಗಿ ಕೊಲೆ ಮಾಡಿದ್ದಾನೆ. ರುದ್ರಪ್ಪ ಆಲಮೇಲ(35) ಹಾಗೂ ಈರಮ್ಮ ಆಲಮೇಲ(30) ಕೊಲೆಯಾದ ದುರ್ದೈವಿ ಗಳಾಗಿದ್ದು ಈರಮ್ಮಳ ಪತಿ ಲಕ್ಷ್ಮಣ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಡಲಿಯಿಂದ ಕೊಚ್ಚಿರುವ ಪರಿಣಾಮ ಈರಮ್ಮಳ ಮುಖದ ಮೇಲಿನ ಚರ್ಮ ಹರೆದು ಮುಖದ ಒಳಗಿನ ಎಲುವು ಅಸ್ಥಿ ಕಾಣಿಸುತ್ತಿದ್ದು ನೋಡಲು ಭಯ ಎಣಿಸುತ್ತಿದೆ. ಇನ್ನೂ ಕಳೆದ ರಾತ್ರಿ ತೋಟದ ಮನೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದ್ದು ಘಟನಾ ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ…