Athani

ಅಥಣಿ ಪುರಸಭೆ ಹಾಗೂ ಸಾರಿಗೆ ಇಲಾಖೆ ಮಳಿಗೆಗಳ ಲೋಕಾರ್ಪಣೆಗೊಳಿಸಿದ ಡಿಸಿಎಂ ಸವದಿ, ಎಂಎಲ್‍ಎ ಕುಮಟಳ್ಳಿ

Share

ರಾಜ್ಯ ಸರ್ಕಾರ ಪ್ರತಿ ಘಟಕದಲ್ಲಿ ವ್ಯಾಪಾರ ಮಳಿಗೆ ಮಾಡಿ ಸಾರಿಗೆ ಇಲಾಖೆಗೆ ಲಾಭ ಮಾಡುವ ಗುರಿ ಹೊಂದಿದೆ ಎಂದು ಸಾರಿಗೆ ಸಚಿವರು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಅಥಣಿಯಲ್ಲಿಯಲ್ಲಿ ಪುರಸಭೆ ಹಾಗೂ ಸಾರಿಗೆ ಇಲಾಖೆ ಮಳಿಗೆಗಳನ್ನು ಉದ್ಘಾಟಿಸಿದರು.

ರಿಬ್ಬನ್ ಕಟ್ ಮಾಡುವ ಮೂಲಕ ಅಥಣಿ ಪಟ್ಟಣದ ಸಾರಿಗೆ ಇಲಾಖೆಯ ವ್ಯಾಪಾರ ಮಳಿಗೆ ಹಾಗೂ ಪುರಸಭೆಯ ವ್ಯಾಪಾರ ಮಳಿಗೆಗಳನ್ನು ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಟಮಳ್ಳಿ ಲೋಕಾರ್ಪಣೆಗೊಳಿಸಿದರು.
: ನಂತರ ಮಾತನಾಡಿದ ಡಿಸಿಎಂ ಸವದಿ 67 ಲಕ್ಷ ವೆಚ್ಚದ ಸಾರಿಗೆ ಇಲಾಖೆ 15 ಮಳಿಗೆಗಳು ಹಾಗೂ 1 ಕೋಟಿ ವೆಚ್ಚದ 21 ಪುರಸಭೆ ಮಳಿಗೆಗಳು ನಿರ್ಮಿಸಿದ್ದು ಸಣ್ಣಪುಟ್ಟ ಉದ್ದಿಮೆದಾರರಿಗೆ ರಿಯಾಯಿತಿ ದರದಲ್ಲಿ ಬಾಡಿಗೆ ನೀಡಿ ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

: ಈ ವೇಳೆ ತಾಲೂಕ ಪಂಚಾಯತ ಅಧ್ಯಕ್ಷ ಭಾರತಿ ಮುಗ್ಗನವರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಮಾಜಿ ಪುರಸಭೆ ಅಧ್ಯಕ್ಷ ದಿಲೀಪ್, ಪುರಸಭೆ ಲೋನಾರಿ, ಪುರಸಭೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!