Uncategorized

ಅಥಣಿಯಲ್ಲಿ ಟೈಯರ್ ರಿಪೇರಿ ಗ್ಯಾರೇಜ್ ಆಕಸ್ಮಿಕ ಬೆಂಕಿ; ಸುತ್ತ ಮುತ್ತಲಿನ ನಿವಾಸಿಗೆ ಆತಂಕ

Share

 

ಅಥಣಿ ಪಟ್ಟಣದ ಹೊರವಲಯದಲ್ಲಿ ಟೈಯರ್ ರಿಪೇರಿಕಾರ್ಯ ಮಾಡುವ ಗ್ಯಾರೇಜನಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿ ಸುತ್ತಲೂ ನಿವಾಸಿಗಳಿಗೆ ಕೆಲವುಕಾಲ ಆತಂಕಕ್ಕೆ ಕಾರಣವಾಗಿತ್ತು.

ಅಥಣಿ ಹೊರವಲಯದ ರೇಣುಕಾ ದೇವಸ್ಥಾನ ಹತ್ತಿರದಲ್ಲಿ ಸದಾಶಿವ ಶ್ರೀಪಾದ ಗೌಳಿ ಎಂಬುವರಿಗೆ ಸೇರಿದ ಗ್ಯಾರೇಜ್ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಮಷೀನ್ ಸುಟ್ಟು ಕುರುಕಲು ಆಗಿದೆ ಎಂದು ತಿಳಿದುಬಂದಿದೆ.

ಅಥಣಿ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಮುಂದಾದಾಗ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಕಾಣಿಸಿದಾಗ ಜೆಸಿಬಿ ಯಂತ್ರ ಸಹಾಯದಿಂದ ಗ್ಯಾರೇಜ್ ತಗಡುಗಳನ್ನು ಮುರಿದು ಬೆಂಕಿಯನ್ನು ನಂದಿಸಲಾದೆ. ಅದೃಷ್ಟವಶಾತ್ ಇದರಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Tags:

error: Content is protected !!