ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಖಾತೆಗಳ ಅದಲು ಬದಲು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು, ಸಿಎಂ ಕೊಡುವ ಖಾತೆಯನ್ನೇ ಚೆನ್ನಾಗಿ ನಿಭಾಯಿಸುತ್ತೇನೆ ಎಂದು ನೂತನ ಸಚಿವ ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಉಮೇಶ ಕತ್ತಿ ಕೆಲವೇ ದಿನಗಳಲ್ಲಿ ಶಾಸಕ ಮುನಿರತ್ನ, ಎಂಎಲ್ ಸಿ ವಿಶ್ವನಾಥ್ ಅವರು ಮಂತ್ರಿ ಆಗಲಿದ್ದಾರೆ. ವಿಶ್ವನಾಥ್ ಮತ್ತು ಮುನಿರತ್ನ ಕೋರ್ಟ್ ಮ್ಯಾಟರ್ ಮುಗಿದ ಕೂಡಲೇ ಮಂತ್ರಿ ಅಗುತ್ತಾರೆ. ಮಂತ್ರಿಗಳಾಗುವ ಇಚ್ಛೆ ಇರುವವರು ಮಂತ್ರಿ ಆಗ್ತಾರೆ. 224 ಶಾಸಕರಿಗೂ ಮಂತ್ರಿ ಸ್ಥಾನ ಸಿಗುತ್ತೆ. ಕಾಯಬೇಕು. ಕಾದರೆ ಮಂತ್ರಿ ಸ್ಥಾನ ಸಿಕ್ಕೆ ಸಿಗುತ್ತದೆ ಎಂದು ಹೇಳಿದ್ದಾರೆ.