ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ತುಂಬಿದ್ದ ಲಾರಿ ವಶಕ್ಕೆ ಪಡೆದಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ 622 ಚೀಲಗಳಲ್ಲಿ ತುಂಬಿದ್ದ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜಸ್ಥಾನ ಮೂಲದ ಲಾರಿ ಚಾಲಕ ಕೈಲಾಶಚಂದ್ರ ವೈಷ್ಣವ ಹಾಗೂ ಕ್ಲೀನರ್ ನಾತುಲಾಲ್ ಮೀನಾ ಬಂಧಿಸಲಾಗಿದೆ. ಬಾಗಲಕೋಟೆ ಯಿಂದ ಸೊಲ್ಲಾಪುರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಇಂಡಿ ಫುಡ್ ಇನ್ಸಪೆಕ್ಟರ್ ಪರಮಾನಂದ ಹೂಗಾರ ಹಾಗೂ ಹೊರ್ತಿ ಪಿ ಎಸ್ ಐ ಎಂ ಬಿ ಬಿರಾದಾರ ನೇತ್ರತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ…