Belagavi

ಅಂಬೇವಾಡಿಯಲ್ಲಿ ಕ್ರಿಕೆಟ್ ಪಂದ್ಯಾವಳಿ, ಸಚಿವ ರಮೇಶ ಜಾರಕಿಹೊಳಿ ಕ್ಯಾಲೆಂಡರ್ ವಿತರಣೆ

Share

ಬೆಳಗಾವಿ ತಾಲೂಕಿನ ಅಂಬೇವಾಡಿ ಮಾರುತಿ ಗಲ್ಲಿಯ ಜೈ ಹನುಮಾನ್ ಸ್ಪೋಟ್ರ್ಸ್ ಸಂಘದಿಂದ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು.

ಬೆಳಗಾವಿ ತಾಲೂಕಿನ ಅಂಬೇವಾಡಿ ಮಾರುತಿ ಗಲ್ಲಿಯ ಜೈ ಹನುಮಾನ್ ಸ್ಫೋಟ್ರ್ಸ್ ಸಂಘದ ವತಿಯಿಂದ ಅಂಬೇವಾಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು 5 ಬಾರಿ ಹಿಂಡಲಗಾ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ರಾಮಚಂದ್ರ ಮನೋಲಕರ, ಗಣೇಶ ಮೂರ್ತಿ ಮತ್ತು ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಮಾತನಾಡಿ, ಯುವಜನತೆ ಹೊರಾಂಗಣ ಕ್ರೀಡೆಗಳನ್ನು ಮರೆತು ಮೊಬೈಲ್‍ಗಳಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದರಿಂದ ಯುವಜನತೆಯಲ್ಲಿ ಕ್ರೀಡಾಮನೋಭಾವ ಕಾಣೆಯಾಗುತ್ತಿದೆ. ಸಚಿವ ರಮೇಶ ಜಾರಕಿಹೊಳಿ ಪ್ರತಿ ಗ್ರಾಮದಲ್ಲೂ ಕ್ರಿಕೆಟ್ ಟೂರ್ನಾಮೆಂಟ್ ಏರ್ಪಡಿಸುವ ಮೂಲಕ ಕ್ಯಾಲೆಂಡರ್ ವಿತರಿಸಲು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ನೂತನ ಸದಸ್ಯರು ಹಾಗು ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಅವರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇರುವ 2021ನೇ ಸಾಲಿನ ಕ್ಯಾಲೆಂಡರ್‍ಗಳನ್ನು ವಿತರಿಸಿದರು.
ಗ್ರಾಮಸ್ಥರು, ಕ್ರಿಕೆಟ್ ಪ್ರೇಮಿಗಳು ಈ ಸಂದರ್ಭದಲ್ಲಿ ಇದ್ದರು.

Tags:

error: Content is protected !!