Vijaypura

ಅಂಪೈರ್ ನೋ ಬಾಲ್ ಕೊಟ್ಟಿದ್ದಕ್ಕೆ ಕ್ರಿಕೇಟ್ ಟೀಂ‌ಗಳ ನಡುವೆ ಮಾರಾಮಾರಿ

Share

ಅಂಪೈರ್ ನೋ ಬಾಲ್ ಕೊಟ್ಟಿದ್ದಕ್ಕೆ ಕ್ರಿಕೇಟ್ ಟೀಂ‌ಗಳ ನಡುವೆ ಮಾರಾಮಾರಿ ನಡೆದಿದೆ. ಕ್ರಿಕೇಟ್ ಸ್ಟಂಪ್, ಬ್ಯಾಟ್, ಬಡಿಗೆ ಹಿಡಿದುಕೊಂಡು ಯುವಕರು ಬಡಿದಾಡಿ ಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಅಂಜುಮನ್ ಶಾಲೆ ಮೈದಾನದಲ್ಲಿ ಘಟನೆ ನಡೆದಿದ್ದು ಅಲ್-ಹಕ್ ಸಿಸಿ ಹಾಗೂ ಇಂದಿರಾ ಸಿಸಿ ಮುದ್ದೇಬಿಹಾಳ ತಂಡಗಳ ನಡುವೆ ಪಂದ್ಯ ನಡೆದಿತ್ತು. ಇಂದಿರಾ ಸಿಸಿ ತಂಡವು ಬ್ಯಾಟಿಂಗ್, ಅಲ್-ಹಕ್ ಸಿಸಿ ಬೌಲಿಂಗ್ ನಡೆಸಿತ್ತು.

ಈ ವೇಳೆ ಅಂಪೈರ್ ನೋ ಬಾಲ್ ಎಂದು ತೀರ್ಪು ಕೊಟ್ಟಿದ್ದ ಎನ್ನಲಾಗಿದೆ. ಈ ವೇಳೆ ಡೋಣಿ ಹಾಗೂ ಮನಗೂಳಿ ಗುಂಪುಗಳ ನಡುವೆ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿ ಎರೆಡು ಗುಂಪುಗಳ ನಡುವೆ ಸ್ಟಂಪ್, ಬಡಿಗೆ, ರಾಡ್ ನಿಂದ ಹೊಡೆದಾಡಿದ್ದಾರೆ. ಮೈದಾನದ ತುಂಬೆಲ್ಲ ಬಡಿಗೆ, ಸ್ಟಂಪ್‌ಗಳು ಬಿದ್ದಿವೆ. ನಿನ್ನೆ ರಾತ್ರಿವರೆಗೂ ನಡೆದ ಮಾರಾಮಾರಿ, ಗಲಾಟೆ ನಡೆದಿದೆ. ಅಲ್ತಾಪ್ ಮನಗೂಳಿ, ಸದ್ದಾಂ ಮನಗೂಳಿ, ಪಾರುಕ್ ಡೋಣಿ ಎಂಬುವರಿಗೆ ಗಾಯಗಳಾಗಿದ್ದು ಇಬ್ಬರು ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಎರಡು ಗುಂಪುಗಳಿಂದ ಪರಸ್ಪರ ದೂರು, ಪ್ರತಿದೂರು ದಾಖಲಾಗಿವೆ.

ಮನಗೂಳಿ ಗುಂಪಿನಿಂದ 41 ಜನರ ಮೇಲೆ, ಡೋಣಿ ಗುಂಪಿನಿಂದ 30 ಜನರ ವಿರುದ್ಧ ದೂರು ದಾಖಲಾಗಿದೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಎರಡು ಗುಂಪುಗಳು ತಾಳಿಕೋಟೆ ಪಟ್ಟಣ ಮಹಲ್ ಓಣಿ ನಿವಾಸಿಗಳಾಗಿದ್ದಾರೆ. ಕ್ರಿಕೇಟ್ ಟೂರ್ನಮೆಂಟ್‌ನಲ್ಲಿ ಗೆದ್ದ ಟೀಂಗೆ 2 ಲಕ್ಷ ಬಹುಮಾನ ಕೂಡ ಇಡಲಾಗಿತ್ತು. ಕಾಂಗ್ರೆಸ್ ಮಾಜಿ ಶಾಸಕ ಸಿ ಎಸ್ ನಾಡಗೌಡ ಅಭಿಮಾನಿಗಳು ಹಮ್ಮಿಕೊಂಡಿದ್ದ ಕ್ರಿಕೇಟ್ ಟೂರ್ನಮೆಂಟ್ ಕಳೆದ 12 ದಿನಗಳಿಂದ ನಡೆಯುತ್ತತ್ತು 12ನೇ ದಿನದ ಟೂರ್ನಮೆಂಟ್ ವೇಳೆ ಕ್ರಿಕೇಟ್ ತಂಡಗಳ ನಡುವೆ ಮಾರಾಮಾರಿ ನಡೆದಿದೆ…

Tags:

error: Content is protected !!